ಪ್ಲಾಸ್ಟಿಕ್ ಗೋದಾಮಿನ ಮೇಲೆ ಬಿಬಿಎಂಪಿ ದಾಳಿ: ರೂ. 1.40 ಲಕ್ಷ ದಂಡ
- National Police Tv
- Nov 13, 2024
- 1 min read

ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ 1 ಗೋದಾಮು ಹಾಗೂ 12 ಮಳಿಗೆಗಳ ಮೇಲೆ ದಾಳಿ ಬಿಬಿಎಂಪಿ ದಾಳಿ ನಡೆಸಿದ್ದು, 2,200 ಕೆ.ಜಿ ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡು 1.40 ಲಕ್ಷ ರೂ. ದಂಡ ವಿಧಿಸಿದೆ.
ಪ್ಲಾಸ್ಟಿಕ್ ಬಳಕೆ ಮಾಡುವ ಗೋದಾಮು ಹಾಗೂ ಮಳಿಗೆಗಳ ಮೇಲೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
ಪದ್ಮನಾಭನಗರ ವ್ಯಾಪ್ತಿಯಲ್ಲಿ ರಾಜಲಕ್ಷ್ಮೀ ಪ್ಯಾಕೇಜಿಂಗ್ ಗೋದಾಮು ಪರಿಶೀಲಿಸಿದ ಅಧಿಕಾರಿಗಳು ಈವೇಳೆ ಗಿಫ್ಟ್ ಪ್ಯಾಕಿಂಗ್ ರ‍್ಯಾಪರ್, ಹ್ಯಾಂಡ್ ಕವರ್, ಪ್ಲಾಸ್ಟಿಕ್ ಗ್ಲಾಸ್, ಸಿಲ್ವರ್ ಲೇಪಿತ ಪ್ಲೇಟ್, ಸಿಲ್ವರ್ ಕವರ್ ಮತ್ತು ಪ್ಲಾಸ್ಟಿಕ್ ರೋಲ್ ಸೇರಿದಂತೆ ಇನ್ನಿತರೆ 600 ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು ರೂ.5೦ ಸಾವಿರ ದಂಡ ವಿಧಿಸಿದರು.





Comments