ಕೊಡಿಗೇಹಳ್ಳಿ ಪೊಲೀಸ್ ಸ್ಟೇಷನ್
- National Police Tv
- Oct 18, 2024
- 1 min read
ಪಿಸ್ತೂಲ್‌ನಿಂದ ಬೆದರಿಸಿ ಚಿನ್ನಾಭರಣಗಳನ್ನು ಕಳವು ಇಬ್ಬರು ವ್ಯಕ್ತಿಗಳ ಬಂಧನ,
70ಲಕ್ಷ ಮೌಲ್ಯದ 1 ಕೆ.ಜಿ ಚಿನ್ನಾಭರಣ ವಶ


ಮನೆಯ ಬಾಗಿಲನ್ನು ಯಾರೋ ಅಪರಿಚಿತರು ಹೊಡೆದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಲಿನಿಕ್‌ನಿಂದ ವಾಪಾಸ್ ಮನೆಗೆ ಬಂದಾಗ, ಮನೆಯ ಮುಂಬಾಗಿಲು ತೆರೆದಿದ್ದು, ಅನುಮಾನ ಬಂದು ಹೊರಗಡೆ ಡೋರ್ ಲಾಕ್ ಮಾಡಲು ಪ್ರಯತ್ನಿಸುತ್ತಿದ್ದಾಗ, ಮನೆಯಲ್ಲಿದ್ದ ಅಪರಿಚಿತ ವ್ಯಕ್ತಿಗಳ ಪೈಕಿ ಓರ್ವ ವ್ಯಕ್ತಿಯು ಪಿರ‍್ಯಾದುದಾರರಿಗೆ ಪಿಸ್ತೂಲನ್ನು ತೋರಿಸಿ, ಬೆದರಿಸಿ, ಪಿರ‍್ಯಾದುದಾರರನ್ನು ಕೊಠಡಿಯೊಂದಕ್ಕೆ ಎಳೆದುಕೊಂಡು ಹೋಗಿ, ಕೂಡಿ ಹಾಕಿ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ.
ಆರೋಪಿತರ ಪತ್ತೆಗಾಗಿ ಯಲಹಂಕ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯವರ ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಮುಖ್ಯವಾಗಿ ಆರೋಪಿಗಳು ಪಿಸ್ತೂಲ್‌ನ್ನು ತೋರಿಸಿ ಭಯಪಡಿಸಿ ಕಳುವು ಮಾಡುವುದಲ್ಲದೇ ಕನ್ನಕಳವು ಸಹ ಮಾಡುತ್ತಿದ್ದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿರುತ್ತಾರೆ. ಈ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯೂ ಸೇರಿದಂತೆ, ಐವರು ವ್ಯಕ್ತಿಗಳ ಪೈಕಿ ಇಬ್ಬರು ಆರೋಪಿಗಳನ್ನು ವಿಶಾಖಪಟ್ಟಣ ಮತ್ತು ಛತ್ತಿಸ್‌ಗಡ್ ಕೇಂದ್ರ ಕಾರಾಗೃಹದಲ್ಲಿದ್ದವರನ್ನು ಬಾಡಿ ವಾರೆಂಟ್ ಮುಖಾಂತರ ಬೆಂಗಳೂರಿಗೆ ಕರೆತಂದಿರುತ್ತಾರೆ.
ಈ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಕೋಡಿಗೆಹಳ್ಳಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳ ಬಗ್ಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಳವು ಮಾಡಿರುವ ಪ್ರಕರಣಗಳ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ.
ಆರೋಪಿಗಳು ಕೋಡಿಗೆಹಳ್ಳಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳು ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಮೂರು ಪ್ರಕರಣಗಳಿಗೆ ಸಂಬಂದಿಸಿದಂತೆ ಚಿನ್ನಾಭರಣಗಳನ್ನು ಮುಂಬೈ ನಗರದ ಜವೇರಿ ಬಜಾರ್‌ನ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ವಿ.ಜೆ. ಸಜೀತ್‌ರವರ ಮಾರ್ಗದರ್ಶನದಲ್ಲಿ ಯಲಹಂಕ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನರಸಿಂಹಮೂರ್ತಿ.ಪಿ ನೇತೃತ್ವದಲ್ಲಿ, ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್.ಎಂ.ಎ, ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.





Comments