VV Puram Police Station - South Division
- National Police Tv
- Nov 13, 2024
- 1 min read
1.22 ಕೋಟಿ ಮೌಲ್ಯದ 1 ಕೆ.ಜಿ 570 ಗ್ರಾಂ ಚಿನ್ನ
ವಜ್ರದ ಆಭರಣಗಳ ವಶ

ಯಾರೋ ಕಳ್ಳರು ಮನೆಯ ಸೆಲ್ಲರ್‌ನಲ್ಲಿರುವ ಗ್ರಿಲ್‌ನ್ನು ಹೊಡೆದು ಮನೆಯೊಳಗೆ ಪ್ರವೇಶಿಸಿ ಮನೆಯ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಸುಮಾರು 2 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆರೋಪಿಯು ಜಕ್ಕೂರಿನಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಕಳವು ಮಾಡಿದ್ದ ಸುಮಾರು 55 ಲಕ್ಷ ಮೌಲ್ಯದ 652 ಗ್ರಾಂ ಚಿನ್ನದ ಆಭರಣಗಳು ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಪ್ರಕರಣದ ಮತ್ತೋರ್ವ ಆರೋಪಿಯು ಮುಂಬೈನಲ್ಲಿರುವ ಆತನ ಅಕ್ಕನ ಮನೆಯಲ್ಲಿ ಹಾಗೂ ಕೊಲ್ಲಾಪುರದಲ್ಲಿನ ಸೊಂಡೊಲಿ ಗ್ರಾಮದ ಸ್ನೇಹಿತನ ಮನೆಯಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಇಟ್ಟಿರುವುದಾಗಿ ತಿಳಿಸಿರುತ್ತಾನೆ.
ಆರೋಪಿಯ ಅಕ್ಕನ ಮನೆಯಿಂದ ಸುಮಾರು 354 ಗ್ರಾಂ ಚಿನ್ನದ ಆಭರಣವನ್ನು ವಶಪಡಿಸಿಕೊಳ್ಳಲಾಯಿತು, ಹಾಗೂ ಆರೋಪಿಯು ಸ್ನೇಹಿತನ ಮನೆಯಲ್ಲಿಟ್ಟಿದ್ದ ಸುಮಾರು ೫೬೪ ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು. ಈ ಪ್ರಕರಣದ ಆರೋಪಿಗಳ ವಶದಿಂದ ಸುಮಾರು 1.22 ಕೋಟಿ ಮೌಲ್ಯದ 1 ಕೆ.ಜಿ 570 ಗ್ರಾಂ ಚಿನ್ನಾಭರಣಗಳು ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ ಭರಮಪ್ಪ ಜಗಳಸರ್, ಐ.ಪಿ.ಎಸ್. ಮಾರ್ಗದರ್ಶನದಲ್ಲಿ ವಿ.ವಿ ಪುರಂ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಮಿದ್ ಬಾಷಾ ನೇತೃತ್ವದಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಎಂ.ಧರ್ಮೇಂದ ಅಧಿಕಾರಿ, ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡಲು ಯಶಸ್ವಿಯಾಗಿರುತ್ತಾರೆ.



Comments