top of page

Girinagara Police Station - South Division

24.15 ಲಕ್ಷ ಮೌಲ್ಯದ 310 ಗ್ರಾಂ ಚಿನ್ನಾಭರಣ, 2 ದ್ವಿ-ಚಕ್ರ ವಾಹನ ವಶ


ದೇವಸ್ಥಾನಕ್ಕೆ ಹೋಗಿ ರಾತ್ರಿ ೮.೧೫ ಗಂಟೆಯ ಸಮಯದಲ್ಲಿ ವಾಪಸ್ಸ್ ಮನೆಗೆ ಬಂದು ಬಾಗಿಲನ್ನು ಒಳಗಿನಿಂದ ಚಿಲಕ ಹಾಕುವ ಸಮಯದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ತಲೆಗೆ ಹೆಲ್ಮೆಟ್ ಧರಸಿಕೊಂಡು ಬಂದು ಪಿರ‍್ಯಾದುದಾರರಿಗೆ, ಪಿರ‍್ಯಾದುದಾರರ ಪತಿಯ ಹೆಸರನ್ನು ಹೇಳಿ ಮನೆಯಲ್ಲಿಯೇ ಇದ್ದಾರೆಯೇ ಎಂದು ಪ್ರಶ್ನಿಸಿರುತ್ತಾರೆ.

ಅಪರಿಚಿತ ವ್ಯಕ್ತಿಯನ್ನು ಮನೆಯೊಳಗೆ ಕರೆದು, ಪತಿಯ ವಿಳಾಸವನ್ನು ನೀಡುವಷ್ಟರಲ್ಲಿ ಅಪರಿಚಿತ ವ್ಯಕ್ತಿಯು ಪಿರ‍್ಯಾದುದಾರರ ಕುತ್ತಿಗೆಯಲ್ಲಿದ್ದ ೪೦ ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿರುತ್ತಾನೆಂದು ಪಿರ‍್ಯಾದಿಯವರು ದೂರಿನಲ್ಲಿ ತಿಳಿಸಿರುತ್ತಾರೆ.

ತೆಲಂಗಾಣ ರಾಜ್ಯದ ಹೈದ್ರಾಬಾದ್ ಚೈತನ್ಯಪುರಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ದಸ್ತಗಿರಿಯಾಗಿ ಚರ‍್ಲಪಲ್ಲಿ ಕಾರಾಗೃಹದಲ್ಲಿರುವುದಾಗಿ ಮಾಹಿತಿಯನ್ನು ಸಂಗ್ರಹಿಸಿ, ನಂತೆರ ಆತನನ್ನು ಬಾಡಿ ವಾರೆಂಟ್ ಮೂಖೇನ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಚಿನ್ನದ ಸರವನ್ನು ಅಪಹರಣ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.

ಬೆಳಗಾವಿ ನಗರ ಶಾಪುರದಲ್ಲಿರುವ ಗೋಲ್ಡ್ ಸೆಂಟರ್‌ನಲ್ಲಿ ಮಾರಾಟ ಮಾಡಿದ ೨೩೦ ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.

ಆರೋಪಿಯು ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರವಾಹನವನ್ನು ಹೊಸಕೆರೆಹಳ್ಳಿ ಸಪ್ತಗಿರಿ ಲೇಔಟ್‌ನ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ವಾಹನವನ್ನು ವಶಕ್ಕೆ ಪಡೆದು. ಅದೇ ದಿನ ಮತ್ತೊಂದು ದ್ವಿ-ಚಕ್ರ ವಾಹನವನ್ನು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್‌ನಲ್ಲಿ ವಶಪಡಿಸಿಕೊಳ್ಳಲಾಯಿತು.

ಹೊಸೂರು ರಸ್ತೆಯ ಗಾರೆಭಾವಿ ಪಾಳ್ಯದಲ್ಲಿ ವಾಸವಿರುವ ಸ್ನೇಹಿತನ ಮನೆಯಲ್ಲಿ ಸ್ನೇಹಿತನಿಗೆ ಗೊತ್ತಿಲ್ಲದ ಹಾಗೆ ಮಂಚದ ಕೆಳಗೆ ಅಡಗಿಸಿಟ್ಟಿದ್ದ ೮೦ ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.

ಆರೋಪಿಯ ಬಂಧನದಿಂದ ೩೧೦ ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.

ಈ ಪ್ರಕರಣದ ಆರೋಪಿಯ ಬಂಧನದಿಂದ ಹುಳಿಮಾವು ಪೊ.ಠಾಣೆ-೨ ಸರ ಅಪಹರಣ ಪ್ರಕರಣಗಳು, ಗಿರಿನಗರ ಪೊ.ಠಾಣೆ-೧ ಸರ ಅಪಹರಣ ಪ್ರಕರಣ, ಬ್ಯಾಟರಾಯನಪುರ ಪೊ.ಠಾಣೆ-೧ ಸರ ಅಪಹರಣ ಪ್ರಕರಣ, ಬಾಗಲಗುಂಟೆ ಪೊ.ಠಾಣೆ-೧ ಸರ ಅಪಹರಣ ಪ್ರಕರಣ, ಸುಬ್ರಮಣ್ಯ ನಗರ ಪೊ.ಠಾಣೆ-೧ ಸರ ಅಪಹರಣ ಪ್ರಕರಣ, ಧಾರವಾಡ ವಿಧ್ಯಾಗಿರಿ ಪೊ.ಠಾಣೆ-೧ ಸರ ಅಪಹರಣ ಪ್ರಕರಣ, ಧಾರವಾಡ ರೂರಲ್ ಪೊ.ಠಾಣೆ-೧ ಸರ ಅಪಹರಣ ಪ್ರಕರಣ ಸೇರಿದಂತೆ ಒಟ್ಟು ೮ ಸರ ಅಪಹರಣ ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ್ ಭರಮಪ್ಪ ಜಗಳಾಸರ್ ಹಾಗೂ ವಿ.ವಿ.ಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಮಿದ್ ಬಾಷ ಮಾರ್ಗದರ್ಶನದಲ್ಲಿ ಗಿರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್‌ಕುಮಾರ್.ಯು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.





 
 
 

Comments


© 2008 by Karnataka Police News Journal. All Rights Reserved.

bottom of page