top of page

Bellanduru Police Station - Whitefield Division

/10 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 16 ಲ್ಯಾಪ್‌ಟಾಪ್‌ಗಳು,

4 ಮೊಬೈಲ್ ಫೋನ್‌ಗಳು ಐ-ಪ್ಯಾಡ್ ವಶ/

ಪಿ.ಜಿ ಯೊಂದರಲ್ಲಿ ವಾಸವಿರುವ ರೂಮಿನ ಬಾಗಿಲನ್ನು ತೆರೆದುಕೊಂಡು ಮಲಗಿದ್ದು, ಬೆಳಗ್ಗೆ ಎಚ್ಚರಗೊಂಡಾಗ ಟೆಬಲ್ ಮೇಲೆ ಇದ್ದ ಮೂರು ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು ಹಾಗೂ ಒಂದು ಐ-ಪ್ಯಾಡ್‌ನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ.

ಅದೇ ದಿನ ಆರೋಪಿಯು ವಾಸವಿರುವ ಕೆ.ಆರ್.ಪುರಂ ವ್ಯಾಪ್ತಿಯ ಪಿ.ಜಿ ಯೊಂದರಿಂದ 10 ಲಕ್ಷ ಮೌಲ್ಯದ 16 ಲ್ಯಾಪ್‌ಟಾಪ್‌ಗಳನ್ನು, ಒಂದು ಐ-ಪ್ಯಾಡ್ ಹಾಗೂ 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಆರೋಪಿಯ ಬಂಧನದಿಂದ ಬೆಳ್ಳಂದೂರು ಪೊಲೀಸ್ ಠಾಣೆಯ-1 ಲ್ಯಾಪ್ ಟಾಪ್ ಕಳುವು ಪ್ರಕರಣ ಮತ್ತು ಬಂಡೇಪಾಳ್ಯ ಪೊಲೀಸ್ ಠಾಣೆಯ-1 ಲ್ಯಾಪ್‌ಟಾಪ್ ಕಳುವು ಪ್ರಕರಣ ಪತ್ತೆಯಾಗಿರುತ್ತವೆ. ಉಳಿದ 12 ಲ್ಯಾಪ್‌ಟಾಪ್ ಗಳು ಹಾಗೂ 4 ಮೊಬೈಲ್ ಫೋನ್‌ಗಳ ಮಾಲೀಕರ ವಿಳಾಸವನ್ನು ಪತ್ತೆ ಮಾಡಬೇಕಾಗಿರುತ್ತದೆ..

ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್‌ಫೀಲ್ಡ್ ಡಾ:ಶಿವಕುಮಾರ್ ಗುಣಾರೇ, ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ಮಾರತ್‌ಹಳ್ಳಿ ಉಪವಿಭಾಗ ಡಾ:ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ ಮಾರ್ಗದರ್ಶನದಲ್ಲಿ ಬೆಳಂದೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಅಧಿಕಾರಿ, ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 
 
 

Comments


© 2008 by Karnataka Police News Journal. All Rights Reserved.

bottom of page